Home Crime ಶಾಲೆಯ ಟಾಯ್ಲೆಟ್‌ನಲ್ಲಿಯೇ 11 ವರ್ಷದ ವಿದ್ಯಾರ್ಥಿನಿಯ ಇಬ್ಬರು ಶಿಕ್ಷಕರಿಂದ ರೇಪ್‌!

ಶಾಲೆಯ ಟಾಯ್ಲೆಟ್‌ನಲ್ಲಿಯೇ 11 ವರ್ಷದ ವಿದ್ಯಾರ್ಥಿನಿಯ ಇಬ್ಬರು ಶಿಕ್ಷಕರಿಂದ ರೇಪ್‌!

0
ಶಾಲೆಯ ಟಾಯ್ಲೆಟ್‌ನಲ್ಲಿಯೇ 11 ವರ್ಷದ ವಿದ್ಯಾರ್ಥಿನಿಯ ಇಬ್ಬರು ಶಿಕ್ಷಕರಿಂದ ರೇಪ್‌!

[ad_1]

India Crime News:  ಒಡಿಶಾದಲ್ಲಿ ಅತ್ಯಂತ ಅಮಾನವೀಯ ಘಟನೆ ನಡೆದಿದ್ದು ಶಾಲೆಯ ಹೆಡ್‌ಮಾಸ್ಟರ್‌ ಹಾಗೂ ಇನ್ನೊಬ್ಬ ಶಿಕ್ಷಕ ಸೇರಿ 6ನೇ ತರಗತಿಯ 11 ವರ್ಷದ ವಿದ್ಯಾರ್ಥಿನಿಯ ಮೇಲೆ ರೇಪ್‌ ಮಾಡಿದ ಘಟನೆ ನಡೆದಿದೆ.

Nabarangpur Class 6 Tribal Student Raped By Teachers Inside School Toilet san
Author

First Published Nov 11, 2023, 2:53 PM IST

ನವದೆಹಲಿ (ನ.11): ಒಡಿಶಾ ರಾಜ್ಯದ ನಬರಂಗ್‌ಪುರ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆ ನಡೆಯಿತ್ತಿದೆ. ಇಲ್ಲಿನ ಸರ್ಕಾರಿ ಶಾಲೆಯ ಶೌಚಾಲಯದಲ್ಲಿ 11 ವರ್ಷದ ಬುಡಕಟ್ಟು ವಿದ್ಯಾರ್ಥಿನಿಯ ಮೇಲೆ ಇಬ್ಬರು ಶಿಕ್ಷಕರು ಅತ್ಯಾಚಾರ ನಡೆಸಿರುವ ಹೇಯ ಘಟನೆ ನಡೆದಿದೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲಿಯೇ ನಬರಂಗ್‌ಪುರ ಸೇರಿದಂತೆ ರಾಜ್ಯವ್ಯಾಪಿ ಪ್ರತಿಭಟನೆಗಳು ನಡೆಯುತ್ತಿದೆ. ಸಂತ್ರಸ್ಥೆಗೆ ನ್ಯಾಯ ಸಿಗಬೇಕು ಎಂದು ಪ್ರತಿಪಕ್ಷಗಳು ಕೂಡ ಒತ್ತಾಯಿಸಿವೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. 6ನೇ ತರಗತಿಯ ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋಗಿದ್ದ ವೇಳೆ ಬಲವಂತವಾಗಿ ನುಗ್ಗಿದ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಇನ್ನೊಬ್ಬ ಶಿಕ್ಷಕ 11 ವರ್ಷದ ವಿದ್ಯಾರ್ಥಿನಿಯ ಮೇಲೆ ಅಲ್ಲಿಯೇ ಅತ್ಯಾಚಾರ ಮಾಡಿದ್ದಾರೆ. ಬಳಿಕ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ ನಬರಂಗಪುರದ ಪೋಕ್ಸೊ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ವಿಶೇಷ ನ್ಯಾಯಾಧೀಶರಾದ ಪ್ರಣತಿ ಸಹಾ ಅವರ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಸಚ್ಚಿದಾನಂದ್ ಸ್ವೈನ್ ಹೇಳಿದ್ದಾರೆ.

ಈ ನಡುವೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಒಡಿಶಾ ಮಾನವ ಹಕ್ಕುಗಳ ಆಯೋಗ (OHRC) ನಬರಂಗಪುರದ ಮುಖ್ಯ ಜಿಲ್ಲಾ ವೈದ್ಯಕೀಯ ಅಧಿಕಾರಿ (CDMO) ಅವರಿಂದ ವರದಿ ನೀಡುವಂತೆ ಹೇಳಿದೆ. ನಾಲ್ಕು ವಾರಗಳಲ್ಲಿ ವರದಿಯನ್ನು ಸಲ್ಲಿಸುವಂತೆ OHRC ಸಿಡಿಎಂಒ-ಕಮ್-ಪಬ್ಲಿಕ್ ಹೆಲ್ತ್ ಆಫೀಸರ್ (PHO) ಗೆ ನಿರ್ದೇಶನ ನೀಡಿದೆ. ಆಸ್ಪತ್ರೆಯಲ್ಲಿ ಬಾಲಕಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆಯೋಗವು ಸಿಡಿಎಂಒಗೆ ತಿಳಿಸಿದೆ.

ನವೆಂಬರ್‌ 9 ರಂದು ಮಂಗಳವಾರ ಈ ಘಟನೆ ನಡೆದಿದೆ. ಬಾಲಕಿಯ ಹೊಟ್ಟೆಯ ಕೆಳಭಾಗದಲ್ಲಿ ಅತೀವ ನೋವು ಅನುಭವಿಸಿದ್ದು, ಪೋಷಕರಿಗೆ ನಡೆದ ವಿಷಯವನ್ನು ತಿಳಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರಬಹುದು ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಪೋಷಕರು ಕುಂಡೇಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಆಕೆಯ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಇನ್ನೊಬ್ಬ ಶಿಕ್ಷಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು ಮತ್ತು ಸಾಮೂಹಿಕ ಅತ್ಯಾಚಾರದ ಆರೋಪದ ಮೇಲೆ ಬಂಧಿಸುವ ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ನಬರಂಗಪುರ ಎಸ್ಪಿ ರೋಹಿತ್ ವರ್ಮಾ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯನ್ನು ನಬರಂಗಪುರದ ಜಿಲ್ಲಾಸ್ಪತ್ರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಪ್ರತಿಪಕ್ಷವಾದ ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯದ ಬಿಜೆಡಿ ಸರ್ಕಾರದ ಮೇಲೆ ತೀವ್ರವಾಗಿ ಟೀಕಿಸಿವೆ. ಮಹಿಳೆಯರ ಮೇಲೆ ಅದರಲ್ಲೂ ವಿಶೇಷವಾಗಿ ಅಪ್ರಾಪ್ತ ಬಾಲಕಿಯರ ಮೇಲಿನ ಅಪರಾಧಗಳ ಹೆಚ್ಚಳಕ್ಕೆ ಸರ್ಕಾರವೇ ಕಾರಣವೆಂದು ಆರೋಪಿಸಿದರು.

“ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ, ನಬರಂಗಪುರ ಶಾಲಾ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ನಮ್ಮ ಪಕ್ಷವುಈ ಕುರಿತು ಬೀದಿಗಿಳಿಯುತ್ತದೆ” ಎಂದು ಬಿಜೆಪಿ ವಕ್ತಾರ ಸೋನಾಲಿ ಸಾಹು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಲವಾರು ಆಡಳಿತ ಪಕ್ಷದ ನಾಯಕರನ್ನು ಬಿಜೆಪಿ ನಾಯಕರು ಪಟ್ಟಿ ಮಾಡಿದ್ದಾರೆ. ವಿವಿಧ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ 65 ಶಾಸಕರ ಪೈಕಿ ಸುಮಾರು 42 ಮಂದಿ ಆಡಳಿತಾರೂಢ ಬಿಜೆಡಿಗೆ ಸೇರಿದವರು ಎಂದು ತಿಳಿಸಿದೆ.

ಭಾರತದಿಂದ ಬರುವ ಚಂದ್ರಯಾನ-3 ಮಾಹಿತಿಗಾಗಿ ರಷ್ಯಾ, ಅಮೆರಿಕ ಕಾಯುತ್ತಿದೆ: ಜೀತೇಂದ್ರ ಸಿಂಗ್‌!

ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ (OPCC) ಅಧ್ಯಕ್ಷ ಶರತ್ ಪಟ್ನಾಯಕ್ ಕೂಡ ಜೇಪೋರ್ ಶಾಸಕ ತಾರಾಪ್ರಸಾದ್ ಬಹಿನಿಪತಿ ನೇತೃತ್ವದಲ್ಲಿ 10 ಸದಸ್ಯರ ಸತ್ಯಶೋಧನಾ ತಂಡವನ್ನು ರಚಿಸಿದರು ಮತ್ತು ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ಪೋಷಕರನ್ನು ಭೇಟಿ ಮಾಡಿದರು.ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷ ಡಿಸಿಸಿ ಅಧ್ಯಕ್ಷ ಮೊನೊರಂಜನ್ ತ್ರಿಪಾಠಿ ನಬರಂಗಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಲ್ಲಿ ಬುಡಕಟ್ಟು ಹೆಣ್ಣುಮಕ್ಕಳು ನಿರಂತರವಾಗಿ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದರು. 11ರ ಹರೆಯದ ವಿದ್ಯಾರ್ಥಿನಿಯರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಪಕ್ಷವು ಆಂದೋಲನ ನಡೆಸಲಿದೆ ಎಂದು ಘೋಷಿಸಿದರು.

ಈ ವರ್ಷದಲ್ಲಿಯೇ ಬೆಂಗಳೂರಿನಲ್ಲಿ ಬಾಡಿಗೆ ದರ ಶೇ. 30ರಷ್ಟು ಹೆಚ್ಚಳ, ವೈಟ್‌ಫೀಲ್ಡ್‌ ನಂ.1

Last Updated Nov 11, 2023, 2:54 PM IST

Download App:

  • android
  • ios


[adinserter block=”4″]

[ad_2]

Source link

LEAVE A REPLY

Please enter your comment!
Please enter your name here